080 26790625
pesschool@gmail.com

President's Message

"ಪ್ರಾರ್ಥನಾ ನಮ್ಮ ಕುಟುಂಬದ ಕನಸಿನ ಕೂಸು. "ಪ್ರಾರ್ಥನಾ" ಹುಟ್ಟಿ ಬಂದಾಗ ಮನಸ್ಸಿಗೆ ನೆಮ್ಮದಿ. ನಮ್ಮ ನಿರೀಕ್ಷೆಯಂತೆ ಈಗ ಬೆಳೆಯುತ್ತಿರುವ "ಪ್ರಾರ್ಥನಾ" ಶಾಲೆಗೆ ಪೋಷಕರ ಸಹಕಾರ, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರ ಅವಿರತ ಪರಿಶ್ರಮ, ಶಿಕ್ಷಕವರ್ಗದವರ ಶ್ರದ್ಧೆ, ಕಲಿಸುವ ಆಸಕ್ತಿ, ಮಕ್ಕಳೆಡೆಗೆ ಬೆಳೆಯುವ ಬಾಂಧವ್ಯ, ಆಡಳಿತ ವರ್ಗದವರ ಕಳಕಳಿ, ಮಕ್ಕಳಲ್ಲಿ ಮೂಡುತ್ತಿರುವ ಶಿಸ್ತು, ಕಲಿಕಾ ಸಾಮಥ್ರ್ಯ, ಒಂದೇ, ಎರಡೇ, ಶಾಲೆ ಮನೆಮನೆಯ ಮಾತಾಗಲು ಮತ್ತೇನು ಬೇಕು?

"ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ||
ಗುರುಸಾಕ್ಷಾತ್ ಪರಬ್ರಹ್ಮ ತಸ್ಮ್ಯೆ ಶ್ರೀ ಗುರುವೇ ನಮಃ"

"ಪ್ರಾರ್ಥನಾ" ನಮ್ಮ ಕುಟುಂಬದ ಕನಸಿನ ಕೂಸು. "ಪ್ರಾರ್ಥನಾ" ಹುಟ್ಟಿ ಬಂದಾಗ ಮನಸ್ಸಿಗೆ ನೆಮ್ಮದಿ. ನಮ್ಮ ನಿರೀಕ್ಷೆಯಂತೆ ಈಗ ಬೆಳೆಯುತ್ತಿರುವ "ಪ್ರಾರ್ಥನಾ" ಶಾಲೆಗೆ ಪೋಷಕರ ಸಹಕಾರ, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರ ಅವಿರತ ಪರಿಶ್ರಮ, ಶಿಕ್ಷಕವರ್ಗದವರ ಶ್ರದ್ಧೆ, ಕಲಿಸುವ ಆಸಕ್ತಿ, ಮಕ್ಕಳೆಡೆಗೆ ಬೆಳೆಯುವ ಬಾಂಧವ್ಯ, ಆಡಳಿತ ವರ್ಗದವರ ಕಳಕಳಿ, ಮಕ್ಕಳಲ್ಲಿ ಮೂಡುತ್ತಿರುವ ಶಿಸ್ತು, ಕಲಿಕಾ ಸಾಮಥ್ರ್ಯ, ಒಂದೇ, ಎರಡೇ, ಶಾಲೆ ಮನೆಮನೆಯ ಮಾತಾಗಲು ಮತ್ತೇನು ಬೇಕು?

"ಪ್ರಾರ್ಥನಾ" ಶಾಲೆಯಲ್ಲೇ ಓದಬೇಕೆನ್ನುವ ಎಳೆ ಮನಸ್ಸುಗಳ ಬಯಕೆ, ಪೋಷಕರ ಆಸೆಗೆ ಆಸರೆಯಾಗುವಂತಹ "ಶುಲ್ಕ ವ್ಯವಸ್ಥೆ" ವಾಹನಗಳ ಸೌಲಭ್ಯ, ವರ್ಷವಷಕ್ಕೂ ಹೆಚ್ಚುತ್ತಿರುವ ದಾಖಲಾತಿ ಅತ್ಯುತ್ತಮ ಪರೀಕ್ಷಾ ಫಲಿತಾಂಶ ನಮ್ಮ ಶಾಲೆಯ ಪ್ರಗತಿಗೆ ಸಾಕ್ಷಿಯಾಗಿದೆ.

ಶಾಲೆಯ ಅಧ್ಯಕ್ಷೆಯಾಗಿ ನಿಮ್ಮೆಲ್ಲರಲ್ಲಿ ನನ್ನ ಮನವಿ-ಬನ್ನಿ, ನಾವೆಲ್ಲರೂ ಸೇರಿ ಶಾಲೆಯನನು ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಸೋಣ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹೊಮ್ಮಿಸೋಣ. "ಏನಾದರೂ ಆಗು ನೀ ಮೊದಲು ಮಾನವನಾಗು" ಎನ್ನುವ ಧ್ಯೇಯದೊಂದಿಗೆ ಮಕ್ಕಳಲ್ಲಿ ಮಾನವೀಯತೆ, ಪ್ರಗತಿಪಥಕ್ಕೆ ಬೇಕಾಗುವ ಸ್ಪರ್ಧಾಮನೋಭಾವ, ಜಾತಿ-ಮತಬೇಧ ಭಾವಗಳಿಲ್ಲದ ಸುಂದರ ಬದುಕಿಗೆ ಸಾಕ್ಷಿಯಾಗೋಣ.

ಜೈ ಹಿಂದ್ ಜೈ ಕರ್ನಾಟಕ.

Mrs. Lalitha Belagere is the President of Prarthana Education Society. She, being herself a teacher, is highly sensitive to the needs of the children.

Web Mail